ಶೇಖರ್ ಕಪೂರ್ (6 ಡಿಸೆಂಬರ್ 1945) ಮೆಚ್ಚುಗೆ ಗಳಿಸಿದ ಭಾರತೀಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗು ನಟ. ಅವರು ಭಾರತೀಯ ದುಷ್ಕರ್ಮಿ ಫೂಲನ್ ದೇವಿಯ ಜೀವನ ಚರಿತ್ರೆಯಾಧಾರಿತ ಹಿಂದಿ ಚಲನಚಿತ್ರ ಬ್ಯಾಂಡಿಟ್ ಕ್ವೀನ್ ಚಿತ್ರದಿಂದ ಜನಪ್ರಿಯತೆಗೆ ಏರಿದರು. ಕ್ವೀನ್ ಎಲಿಜಬೆತ್ (ಎಲಿಜಬೆತ್ ಮತ್ತು ಅದರ ಉತ್ತರಭಾಗ ಗೋಲ್ಡನ್ ಏಜ್) ಅವರ ಐತಿಹಾಸಿಕ ಚಿತ್ರಗಳು ಅತ್ಯುತ್ತಮ ಚಿತ್ರ ಮತ್ತು ಕೇಟ್ ಬ್ಲ್ಯಾಂಚೆಟ್ಟಿಗೆ ಅತ್ಯುತ್ತಮ ನಟಿ ಸೇರಿದಂತೆ 7 ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಗಳಿಸಿಕೊಂಡಿತು. == ಆರಂಭಿಕ ಜೀವನ == ಕಪೂರ್ ಈಗ ಪಾಕಿಸ್ತಾನದಲ್ಲಿರುವ ಲಾಹೊರಿನಲ್ಲಿ ವೈದ್ಯರಾದ ಕುಲಭೂಶಣ ಕಪೂರ್ ಹಾಗು ಪತ್ರಕರ್ತೆ-ರಂಗಭೂಮಿ ನಟಿ ಶೀಲ್ ಕಾಂತಾ ದಂಪತಿಗಳಿಗೆ ಜನಿಸಿದರು.ಇವರು ಬಾಲಿವುಡ್ ನಟರಾದ ದೇವ್ ಆನಂದ್ ಹಾಗು ವಿಜಯ್ ಆನಂದ್ ಇವರ ಸಹೋದರ ಅಳಿಯ.ಇವರನ್ನು ಚಿತ್ರರಂಗಕ್ಕೆ ಹೋಗಲು ಇವರ ತಂದೆ ವಿರೋಧಿಸಿದರಿಂದ ಸಂತ ಸ್ತೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರಾಧ್ಯಯನ ಮಾಡಿ ಇಂಗ್ಲೆಂಡಿನಲ್ಲಿ ಚರ್ಟೆಡ್ ಅಕ್ಕೌಂಟಂಟ್ ಆಗಿ ಕೆಲಸ ಪ್ರಾರಂಭಿಸಿದರು. == ಚಲನಚಿತ್ರಗಳು == === ನಿರ್ಮಾಪಕರಾಗಿ === ೧೯೯೮ - ದಿಲ್ ಸೇ ೨೦೦೨ - ಗುರು ೨೦೧೧ - ಬಾಲಿವುಡ್ ೨೦೧೩ - ಪಾನಿ (ಬಿಡುಗಡೆಯಾಗಿಲ್ಲ) === ಬರಹಗಾರರಾಗಿ === ೨೦೧೩ - ಪಾನಿ (ಬಿಡುಗಡೆಯಾಗಿಲ್ಲ) == ಪ್ರಶಸ್ತಿ-ಪುರಸ್ಕಾರಗಳು == ೨೦೦೨ರಲ್ಲಿ ಭಾರತ ಸರ್ಕಾರ ಭಾರತದ ನಾಲ್ಕನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಶೇಖರ್ ಕಪೂರರಿಗೆ ನೀಡಿತು. == ಉಲ್ಲೇಖಗಳು ==